ನಾನು ಡಚಾವು-೪

ಆಗಷ್ಟ್ 5, 2012

ಗ್ಯಾಸ್ ಚೇಂಬರ್ ಗಳು

ಸುಮಾರು  ೫೦೦೦ ಕೈದಿಗಳಿಗೆಂದು ಪ್ರಾರಂಭಿಸಲ್ಪಟ್ಟ  ಕಾನ್ಸಂಟ್ರೆಶನ್ ಶಿಬಿರ ೧೯೪೨ ರ ಸುಮಾರಿಗೆ ೨೫ ಸಾವಿರ ದಾಟಿತು.ಆದರೆ ಅದಕ್ಕಾಗಿ ಮೂಲಭೂತ ಸೌಕರ್ಯಗಳು ಏನೂ ಜಾಸ್ತಿ ಆಗಲಿಲ್ಲ.ಬದಲಿಗೆ ಯಾತನಮಯ ಶಿಕ್ಷೆಗಳು ಕಡಿಮೆಯಾದವು.
ಅವುಗಳ ಬದಲಿಗೆ ಪ್ರಾರಂಭವಾದದ್ದೇ ಗ್ಯಾಸ್ ಚೇಂಬರ್.ಈ ಗ್ಯಾಸ್ ಚೇಂಬರ್ ಗಳನ್ನು ಸುಮಾರು ವರುಷಗಳು ಮೊದಲೇ ಕಟ್ಟಿದ್ದರು ಆದರೆ ಅವುಗಳನ್ನು ಉಪಯೋಗಿಸಿರಲಿಲ್ಲ. ಗ್ಯಾಸ್ ಚೇಂಬರ್ ಇರುವ ಜಾಗಕ್ಕೆ ಕ್ರಿಮಾಟೋರಿಯಂ ಎಂದು ಹೆಸರು.
ಕೆಲಸ ಮಾಡಲು ಅಸಮರ್ಥರಾದವರನ್ನು ಬೇರೆ ಬೇರೆ ಶಿಬಿರಾರ್ಥಿಗಳನ್ನು ಗುಂಪುಗಟ್ಟಲೆ ಕರೆದು ತರುತ್ತಿದ್ದರು.ಅಲ್ಲಿ ೩ ಕೋಣೆಗಳಿದ್ದವು.ಮೊದಲ ಕೋಣೆಯು ಸುಮಾರು  ಉದ್ದ ಸುಮಾರು ೨೦*೫೦ ಅಡಿಗಳಷ್ಟಿತ್ತು.ಈ ಕೋಣೆಯಲ್ಲಿ ಕೈದಿಗಳು ತಮ್ಮ ಬಟ್ಟೆಗಳನ್ನು ತೆಗೆದು ಸಂಪೂರ್ಣ ನಗ್ನರಾಗಬೇಕು.ಈ ಬಟ್ಟೆಗಳನ್ನು ನಂತರ ಬರಾಕ್ ನ ಕೈದಿಗಳಿಗೆ ಹಂಚುತ್ತಿದ್ದರು.ನಡುವಿನ ಕೋಣೆಯೇ ಗ್ಯಾಸ್ ಚೇಂಬರ್.ಈ ಕೋಣೆಗೆ ಹೋಗಲು ಕೈದಿಗಳು ನಿರಾಕರಿಸಬಹುದೆಂದು ಇವುಗಳು ರೋಗ ನಿರೋಧಕ ‘ಶವರ್’ ಗಳೆಂದು ಹೆಸರಿಸಿ ಜನರನ್ನು ಮರಳು ಮಾಡುತ್ತಿದ್ದರು.ನಡುವಿನ ಕೋಣೆಯಲ್ಲಿ ಶವರ್ ಗಳ ಹಾಗೆ ಕಾಣುವ ಕೆಲವೊಂದು ಸಾಧನಗಳನ್ನೂ ಆಳವಡಿಸಿದ್ದರು.ಕೋಣೆಯನ್ನು ಹೊರಗಿನ ಗಾಳಿ,ಬೆಳಕು ಬಾರದಂತೆ ಸಂಪೂರ್ಣ ವಾಗಿ ಸೀಲ್ ಮಾಡಿರುತ್ತಿದ್ದರು. ಈ ಕೋಣೆಯಲ್ಲಿ ಸಮಾರು ೧೫೦ ಕೈದಿಗಳನ್ನು ಏಕಕಾಲದಲ್ಲಿ ಕೂಡಿಸಿಟ್ಟು ಪ್ರುಸ್ಸಿಕ್ ಆಸಿಡ್(Prussik acid -zyklon B )  ಎಂಬ ವಿಶಾನೀಲವನ್ನು ಬಿಡುತ್ತಿದ್ದರು.ಈ ಅವಧಿ ಅತ್ಯಂತ ಯಾತನಾ ಮಯವಾಗಿರುತ್ತಿತ್ತು.ಉಸಿರಾಡಲೂ ಆಗದೇ ಅತ್ತಿಂದಿತ್ತ ಅಡ್ಯಾದಲೂ ಆಗದೇ ಚೀರುತ್ತಿದ್ದರು,ಒಬ್ಬರಿಗೆ ಒಬ್ಬರು ಹಾಯುತ್ತಿದ್ದರು.ಗೋಡೆಗಳಿಗೆ ಡಿಕ್ಕಿ ಹೊಡೆಯುತ್ತಿದ್ದರು.ಎಷ್ಟೋ ಜನರು ವಿಷನೀಲ ಬರುತ್ತಿದ್ದ ನಳಿಕೆ ಯನ್ನು ಕೈ ಇಂದ ಮುಚ್ಚಲೂ ಪ್ರಯತ್ನಿಸುತ್ತಿದ್ದರು.ಆದರೆ ಅವರ ದೇಹ ದಲ್ಲಿ ಶಕ್ತಿ ಇಲ್ಲದೇ ಬಿಟ್ಟು ಬಿಡುತ್ತಿದ್ದರು. ಬದುಕಲು ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದರು.೧೫-೨೦ ನಿಮಿಷಗಳ ಅವಧಿಯಲ್ಲಿ ೧೫೦ ಜನರೂ ಇಹಲೋಕದ ಯಾತ್ರೆಯನ್ನು ಮುಗಿಸಿರುತ್ತಿದ್ದರು.ಅವರ ಆಕ್ರಂದನ ಈಗಲೂ ನನ್ನ ಕಿವಿಯಲ್ಲಿ  ಮಾರ್ದನಿಸುತ್ತಿರುತ್ತದೆ.ನಾನು ಆ ಸಮಯದಲ್ಲಿ ಮೂಕ ಪ್ರೇಕ್ಷಕಿಯ ಹೊರತು ಬೇರೇನೂ ಮಾಡಲು ಆಗುತ್ತಿರಲಿಲ್ಲ.ಆದರೆ ಕೆಲವೊಮ್ಮೆ ಈ ಗ್ಯಾಸ್ ಚೆಂಬರುಗಳು ಕೈದಿಗಳಿಗೆ ದಚಾವುನಿಂದ ಮುಕ್ತಿ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದೆ.
ನಂತರ ವಿಷಾನೀಲ ಹೊರಗಡೆ ಹೋಗಲು ಕೆಲವೊಂದು ಮುಚ್ಚಳಿಕೆ ಗಳನ್ನು ತೆಗೆಯುತ್ತಿದ್ದರು.ಹಾಗೂ ಸ್ವಲ್ಪ ಹೊತ್ತಿನ ನಂತರ ಎಲ್ಲಾ ಹೆಣಗಳನ್ನು ಒಂದು ಕಡೆ ಒಗೆಯುತ್ತಿದ್ದರು.ಅವುಗಳನ್ನು ಸುಡಲು ೩ ನೆಯ ಕೋಣೆಯಲ್ಲಿ ೬ ಫರ್ನೇಸ್ ಗಳನ್ನು ಕಟ್ಟಿದ್ದರು.ಅವುಗಳಲ್ಲಿ ೨-೩ ಹೆಣಗಳನ್ನು ಒಟ್ಟಿಗೆ ಹಾಕಿ ಕಲ್ಲಿದ್ದಲಿನಿಂದ ಸುಡುತ್ತಿದ್ದರು.ಇದೊಂದು ಕರಾಳ ಅಧ್ಯಾಯ.ನನ್ನ ಅಂದಾಜಿನ ಪ್ರಕಾರ ೧೯೪೨ ರಿಂದ ೧೯೪೫ ರವರೆಗೆ ಸುಮಾರು ೧೧೦೦೦ ಜನರ ಮಾರಣ ಹೋಮ ನಡೆದಿದೆ.೧೯೪೫ ರಿಂದ ಕಲ್ಲಿದ್ದಲಿನ ಅಭಾವದ ಕಾರಣ ಹೆಣದ ರಾಶಿಯನ್ನೇ ಅಗ್ನಿದಹನ ಮಾಡತೊಡಗಿದರು.
ಪ್ರಯೋಗಗಳು
ಏನೇನು ಅಮಾನವೀಯತೆ ಗಳು ಇವೆಯೋ ಅವೆಲ್ಲ ವನ್ನು ನಾನು ಕಂಡಿರುವೆ,ಅವೆಲ್ಲವೂ ಮರಿಯಲಾಗದೆ ಕಣ್ಣ ಮುಂದೆ ಹಾದು ಹೋಗುತ್ತಾ ಇರುತ್ತವೆ.ವೈದ್ಯ ವಿಜ್ನ್ಯಾನಿಗಳು ಸೈನಿಕರಿಗೆ ತಯಾರು ಮಾಡಿದ ಔಷಧಿಗಳ ಪ್ರಯೋಗಗಳನ್ನು ದಚಾವುವಿನ ಕೈದಿಗಳ ಮೇಲೆ ಮಾಡುತ್ತಿದ್ದರು.ಈ ಎಲ್ಲಾ ಪ್ರಯೋಗಗಳು ಗಟ್ಟಿ ಮುಟ್ಟಾದ ಯುವಕರ ಮೇಲೆ ಆಗುತ್ತಿದ್ದವು.ಯುಧ್ಧದಲ್ಲಿ ವಿಮಾನಗಳು ಧ್ವಂಸವಾದಾಗ ಪೈಲಟ್ ಗಳು ಮಂಜು ಗಟ್ಟಿದ ನೀರಿನಲ್ಲಿ ಬಿದ್ದು ಸಾಯತೊಡಗಿದರು.ಅದಕ್ಕಾಗಿ ದಚಾವುವಿನ ಕೈದಿಗಳಿಗೆ ಮಾಪಕಗಳನ್ನು ಕಟ್ಟಿ ಮಂಜುಗಡ್ಡೆ ತುಂಬಿದ ಟ್ಯಾಂಕಿನಲ್ಲಿ ದಿನಗಟ್ಟಲೆ ಬಿಡುತ್ತಿದ್ದರು.ಅವರ ಯಾವ ದೇಹದ ಭಾಗಗಳು ಮೊದಲು ನಿಷ್ಕ್ರಿಯ ವಾಗುತ್ತವೆ,ಯಾವ ಹಂತದಲ್ಲಿ ಸಾವು ಬರುತ್ತದೆ,ಹಾಗೂ ಅವುಗಳ ಜೊತೆಗೆ ಇಂಥ ಸಮಯದಲ್ಲಿ ಯಾವ ಸುರಕ್ಷತಾ ಕ್ರಮಗಳನ್ನು ಜರುಗಿಸಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಅಧ್ಯಯನ ಮಾಡುತ್ತಿದ್ದರು.ಇಂತಹ ಬೇರೆ ಬೇರೆ ಅಧ್ಯಯನದಲ್ಲಿ ಸುಮಾರು ೫೦೦ಕ್ಕೂ ಹೆಚ್ಚಿನ ಕೈದಿಗಳು ಸಾವನ್ನಪ್ಪಿದ್ದಾರೆ.
ಮುಕ್ತಿ
ಈ ಎಲ್ಲಾ ಚಟುವಟಿಕೆಗಳು ದಿನಂಪ್ರತಿಯಾಗಿ ೧೨ ವರ್ಷಗಳವರೆಗೆ ನಡೆದವು.ಇದಕ್ಕೆ ಕೊನೆ ಆಗುವುದೆಂದು ನನಗೆ ಎಂದೂ ಅನಿಸಲೇ ಇಲ್ಲ.ಆದರೆ ೧೯೪೫ ರಲ್ಲಿ ಜರ್ಮನಿ ಯುಧ್ಧದಲ್ಲಿ ಸೋಲತೊಡಗಿತು.ಆಗ ನನ್ನಲ್ಲಿ ಆಶಾ ಕಿರಣ ವೊಂದು ಉದಯಿಸಲಾರಂಭಿಸಿತು.ಈ ಹಿಂಸೆಗಳೆಲ್ಲ ಕೊನೆಗೊಳ್ಳುವ ಕಾಲ ಬರುತ್ತಾ ಇದೆ ಎಂದು ಸಂತಸ ಪಡಲಾರಂಭಿಸಿದೆ.ಅಮೇರಿಕಾ ದೇಶದ ಸೈನ್ಯಗಳು ಶಿಬಿರದ ದೂರಕ್ಕೆಲ್ಲ ಬಿದ್ದಿದ್ದ ಶವಗಳ ಜಾಡು ಹಿಡಿದು ಬಂದರು.ಶರಣಾಗತರಾಗದ SS ಆಫೀಸರ್ ಗಳನ್ನೂ ಕೊಂದರು. ಇಲ್ಲಿ ಸಾವಿರಗಟ್ಟಲೆ ಬಿದ್ದಿದ್ದ ಶವಗಳನ್ನು ಕಂಡು ಅವಾಕ್ ಆದರು.ಹಾಗೂ ಎಲ್ಲಾ  ಕೈದಿಗಳನ್ನು ಮುಕ್ತಗೊಳಿಸಿದರು.ಅಂದು ೨೯ ಏಪ್ರಿಲ್  ೧೯೪೫.ನನ್ನ ಜೀವನದ ಅತ್ಯಂತ ಸಂಭ್ರಮದ ಘಳಿಗೆ.ಅಮೇರಿಕ ಪಡೆಗಳು ಉಳಿದ ಕೈದಿಗಳ ಆರೋಗ್ಯ ದ ಸಂಪೂರ್ಣ ಆರೈಕೆ ಮಾಡಿದರು.ಅವರನ್ನೆಲ್ಲ ಅವರವರ ದೇಶದ ಗುಂಪಿನೊಡನೆ ಸೇರಿಸಿ.ಅವರವರ ದೇಶಕ್ಕೆ ಕಳುಹಿಸಿದರು.
ನಾನು ಡಚಾವು, ಇತಿಹಾಸದಲ್ಲಿ ಒಂದು ದಾರುಣ ಅಧ್ಯಾಯವಾಗಿಯೇ ಉಲ್ಲೇಖಿಸಲ್ಪಡುತ್ತೇನೆ.ಇದಕ್ಕೆ ಮುಕ್ತಿಯೇ ಇಲ್ಲ.ಇಂತಹ ಇತಿಹಾಸ ಮತ್ತೆಂದೂ ಮರುಕಳಿಸದಿರಲಿ.
NEVER AGAIN
Advertisements

ಹಕ್ಕಿಯ ಬಲೆ

ಸೆಪ್ಟೆಂಬರ್ 28, 2011

ಮರದ ಪಕ್ಕದಲ್ಲೇ ಕುಳಿತೆ ತಬ್ಬಿಕೊಂಡೇ ಬಲೆಗೆ
ಸುಳಿವು ಹತ್ತಿತೇನೋ ಹಕ್ಕಿಗೆ ಓಡಿಹೋಯಿತು ಒಳಗೆ

ಸಂಜೆಯಾಗಲು ಬಲೆ ಬದಿಗಿರಿಸಿ
ಕುಳಿತೆ ಸುಮ್ಮನೆ ಧ್ಯಾನಿಸಿ
ಕೈ ಎತ್ತಿ ಕರೆದೆ ಹಕ್ಕಿಯ
ಬಂತು ಹೊರಗದು ಧಾವಿಸಿ

ಬೊಗಸೆ ಕೈಯೊಳು ಹಿಡಿದು ಮುತ್ತಿಕ್ಕಿ
ಹಾರಿ ಬಿಟ್ಟೆ ಬಾನಿಗೆ
ಆತನಿಗೆ ಆಗಾದ ಖುಷಿಯನು
ಯಾರಿಗೆ ಹೇಳಲಿ ? ಹೇಗೆ ?

ಬದಿಗೆ ಇರಿಸಿದ ಬಲೆಯು ಏತಕೋ
ಹುಳಿ ಹುಳಿ ಮುಖ ಮಾಡಿತು
ಬಾನ ಸೇರಿದ ಪುಟ್ಟ ಹಕ್ಕಿಯ
ಪಿಳಿ ಪಿಳಿ ತುಸು ನೋಡಿತು

ಪೂರ್ಣವಿರಾಮ.

ಸೆಪ್ಟೆಂಬರ್ 28, 2011

ಪರಕೀಯರು ವಿಭಜಿಸಿದ ಸುಸಂಸ್ಕೃತ ದೇಶಗಳು
ದ್ವೇಷದ ದೀಪಗಳಾದವು ಧಗ ಧಗ ಉರಿದು

ಹಿಡಿಯ ಬಯಸಿದಾಗ ಬಿಳಿಪಾರಿವಾಳವನು
ಕಪಟ ದೇಶವು ಸಾರಿತು ಅಘೋಷಿತ ಕದನವನು

ತಮ್ಮದಲ್ಲದ ಭುವಿಯೊಡೆತನಕೆ
ಭಾಡಗಿ ಸೈನ್ಯವ ತಂದಿತು
ರಕ್ತದ ಕಾಲುವೆ ಹರಿಸಿದರೂ
ಒಂದಿಂಚನೂ ಪಡೆಯದಾಯಿತು

ಅಚಲವಾದ ಆಟಲನ ಸೈನ್ಯವು
ನವಾಜನ ಆವಾಜ್ ಮುಚ್ಚಿಸಿತು
ಜಗವು ಬಯಸಿದ ಶಾಂತಿವಾಕ್ಯಕೆ
ನೀಡಿತು ಕದನವು ಪೂರ್ಣವಿರಾಮ.

ಶತ್ರುವಿಗೆ ಖಾರವಾಗುಳಿಯಿತು ಕಾರ್ಗಿಲ್
ಏನೇ ಆದರೂ ಬಿಟ್ಟು ಕೊಡೆವು ಕಾಶ್ಮೀರ್..

ಕಿಟಕಿಯಲ್ಲಿ ಮಳೆ

ಸೆಪ್ಟೆಂಬರ್ 28, 2011

ಮಟ ಮಟ ಮಧ್ಯಾಹ್ನದೊಳು
ತಪನನ ತಾಪವು ತುಂಬಿರಲು
ಉದಯವಾಯಿತಾಗ ಕಾರ್ಮೋಡ ಸಾಮ್ರಾಜ್ಯ
ಗುಡು ಗುಡು ಎಂದು ಎದೆ ನಡುಗಿಸುತ
ಪ್ರಕಾಶಮಾನವಾದ ಬೆಳಕನು ಫಕ್ಕನೆ ಬೀರುತ
ಎತ್ತಿ ಒಗೆಯುವ ವೇಗದಿ ಬರುತಿರುವ
ಮಾರುತದ ಎದುರು ಕುಬ್ಜನಾದ ಆ ರವಿ

ಒಮ್ಮೆಲೇ ತಲೆ ಸೀಳುವ ಹನಿಗಳೊಡನೆ
ಧರೆಗೆ ದಂಡೆತ್ತಿ ಬಂದ ಮಳೆರಾಯ
ನಡು ನಡುವೆ ಘರ್ಜಿಸುತ ತಲೆ ಎತ್ತಿ ನಿಂತ
ಹೆಮ್ಮರಗಳ ಶಿರ ಬುಡ ಮಾಡುತ್ತ
ಮನ ಮನಗಳ ರಂಜಿಸಿ
ಕೆರೆ ಕಂದಕಗಳ ತಣಿಸಿ
ಚರಂಡಿಗಳ ಬರಿದಾದ ಒಡಲವ
ತುಂಬಿ ತುಳುಕಾಡಿಸಿದ

ಎಲ್ಲವನ್ನೂ ಅಲಕ್ಷಿಸುತ್ತ ಭೂಮಿಯನ್ನಾಳಿದ
ಮಾನವ ಕುಳಿತಿದ್ದ ಮನೆಯ ಮೂಲೆಯಲ್ಲಿ ತೆಪ್ಪಗೆ..

೧೦-೮-೨೦೦೧ ರ ವಿಜಯ ಕರ್ನಾಟಕದಲ್ಲಿ ಸಹ ಪ್ರಕಟ

ನೀನೇ ಹೇಳಿ ನೋಡೊಮ್ಮೆ..

ಸೆಪ್ಟೆಂಬರ್ 28, 2011

ನಿನ್ನ ಕಣ್ತಪ್ಪಿಸಿ ನೋಡುತಿರುವ ಆ ಕಂಗಳು
ನಿನ್ನಿಂದಲೇ ನಾಚಿ ಬಿದ್ದಿಹ ಗಲ್ಲದ ಗುಳಿಯು
ಅರಿಯದೇ ಮೂಡಿಹ ಆ ಮುಗುಳ್ನಗೆಯೂ ನಿನಗಾಗಿ
ತಡವೇಕೆ
ನೀನೇ ಹೇಳಿ ನೋಡೊಮ್ಮೆ ಆ ಮನದ ಭಾವನೆ

ಜೊತೆಯಲಿ ನೀನಿರುವಾಗ ಪಡುವ ಸಂತಸ
ನೀನಾಡಿದ ಮಾತಿನಿಂದ ಮೂಡಲು ಉಲ್ಲಾಸ
ಎಲ್ಲ ಆನಂದಗಳು ನಿನ್ನಿಂದಲೇ ಎಂದಾಗ
ತಡವೇಕೆ
ನೀನೇ ಹೇಳಿ ನೋಡೊಮ್ಮೆ ಆ ಮನದ ಭಾವನೆ

ಕೇಳದೆಯೂ ಹೇಳುವ ಆ ದಿನಚರಿಗಳು
ತಿಳಿದರೂ ಕೇಳುವ ಎಷ್ಟೋ ಪ್ರಶ್ನೆಗಳು
ಹೇಳದೆಯೂ ತಿಳಿವ ಮೌನ ಪ್ರೀತಿಯ ಕಂಡೂ
ತಡವೇಕೆ
ನೀನೇ ಹೇಳಿ ನೋಡೊಮ್ಮೆ ಆ ಮನದ ಭಾವನೆ

ನೀ ಕಾಣದೇ ಇರುವಾಗ ಪಡುವ ಕಾತರವೆಷ್ಟೋ
ನೀನಾಡುವ ಮಾತು ಆಲಿಸುವ ತವಕವೆಷ್ಟೋ
ಇಷ್ಟೆಲ್ಲಾ ಇರುವಾಗ ಇನ್ನೂ ತಡವೇತಕೋ ಮಿತ್ರಾ
ಅವಳೇ ಹೇಳಲಿ ಎಂಬ ಮೊಂಡು ಹಠವೇಕೋ
ನೀನೇ ಹೋಗಿ ಹೇಳಬಾರದೇ ಮನದ ಭಾವನೆ..

ಕವನವಲ್ಲವಿದು ಮನದಾಳದ ಭಾವನೆ..

ಸೆಪ್ಟೆಂಬರ್ 28, 2011

ಹೊರಟಿರುವೆ ನಾನಿಂದು ಗೆಳೆಯರನು ಅಗಲಿ
ಬರುತಿರುವ ದು:ಖವನು ಹೇಗೆನಾ ನುಂಗಲಿ?

ಮಾತು ಮಾತಿಗೂ ನಗುವಿನಾ ಹಾಸು
ನಡುನಡುವೆ ಕೋಪದಾ ಗುಸುಗುಸು
ಹ್ರದಯದೀ ಬಂದಂತಹ ಆ ಓಡನಾಟ
ಕಂಡಿರದು ಜಗವು ಇಂತಹದೊಂದು ನೋಟ

ಅಭ್ಯಾಸದ ಅವಧಿಯೊಳು ಮಾಡಿದಂತಹ ಮೋಜು
ಬಡೆಯದಿರಲು ಮುಗುದೊಬ್ಬರ ಮನದ ರೊಜ್ಜು
ವಿಚಾರಗಳು ಬಹುವಾದರೂ ಇರುತಿತ್ತೊಂದೇ ಭಾವ
ಈ ವಿರಹದಿಂದಾಗುವುದು ಬಹಳ ನೊವ

ಅಗಲುವ ಸಮಯವದು ಸಮೀಪಿಸಲು
ಮುಗಿಯಲಾರದ ಮಾತುಗಳು ತುಂಬಿರಲು
ಹೊರಟಿರುವೆ ನಾನಿಂದು ಋಣಭಾರನಾಗಿ
ಹೇಗೆ ಕಂಡೇನು ಇಂಥಾ ಸಖ್ಯ ಎಲ್ಲಿಗೋ ಹೊಗಿ?

ಈ ಜಗಜಾತ್ರೆಯೊಳು ಇನ್ನೆಲ್ಲಿ ಕಾಣಲಿ
ಮನಸ್ಸಿನ ಭಾವನೆಗಳನ್ಯಾರಬಳಿ ಪೇಳಲಿ?
ನೊವ ಮರೆಸಿ ಹರುಷ ಸುರಿಸಿ
ಉತ್ತಮವ ಗುರುತಿಸಿ ಕೆಟ್ಟದ ತಿಳಿಸಿ
ಅತ್ತು ಅಳಿಸಿ,ನಕ್ಕು ನಲಿಸಿದವರ ಬಿಟ್ಟು
ಬಹುದೂರ ಪಯಣಿಸಿ ಹೊಗಲಿ ಎಲ್ಲಿ? ಹೇಗಿರಲಿ ನಾನಲ್ಲಿ?

ದು:ಖದ ಮೊಡವದು ಗುಡುಗಿರಲು
ಕಣ್ಣಂಚಿನಲಿ ಮಳೆಯಿರಲು ಆವಿಯಾಗದೇ ಹೊಗದು
ಸುರಿಸುತಲೂ ಇಹುದು ಸುರಿಯುತಲಿಹುದು..

ಏಕೆ?

ಸೆಪ್ಟೆಂಬರ್ 28, 2011

ವರುಷಗಳೇ ಕಳೆದವು ಆ ದಿನಗಳು ಉರುಳಿ
ಆದರೂ ನಿನ್ನ ಕಣ್ಣಲ್ಲಿ ಅವಳ ನಿರೀಕ್ಷೆಯೇಕೆ

 

ನಿನ್ನ ಪ್ರೀತಿಯ ಕಂಡೂ ಕಾಣದವರು
ನೆನೆಯಲು ಇನ್ನೂ ಅರ್ಹರೇ? ಏಕೆ

 

ನಿನ್ನ ಪ್ರೀತಿಗೆ ಯಾರು ದ್ರೋಹ ಬಗೆದರೋ
ಅವರ ಸ್ಥಿರಚಿತ್ರ ನಿನ್ನ ಬಳಿಯೇಕೆ

 

ನಿನ್ನ ಹೂವಂತಹ ಹ್ರದಯದಲಿ
ಆ ಬಾಡಿದ ಪ್ರೀತಿಯ ನೆನಪುಗಳೇಕೆ

 

ಯಾರು ನಿನ್ನ ಭಾವನೆಗಳನ್ನರಿಯದೇ ಹೊದರೋ
ಅವರ ಅಧಿಕಾರ ನಿನ್ನ ಹ್ರದಯದ ಮೇಲೆ ಇನ್ನೂ ಏಕೆ

 

ಯಾವ ಸಂಬಂಧ ಮುಗಿ(ರಿ)ದು ಹೋಯಿತೋ
ಅದು ಈಗಲೂ ನಿನ್ನ ಉಸಿರಾಗಿರುವುದೇಕೆ

 

ನಿನ್ನ ವರ್ತಮಾನದಲ್ಲೇ ಇರುವವರು
ನಿನ್ನ ಪಾಲಿಗೆ ಅತೀತ (ಅತೀ ಅತ್ತ)ವಾದುದೇಕೆ ?

 

ಮಾಯೆ

ಸೆಪ್ಟೆಂಬರ್ 28, 2011

ನಿನ್ನ ಮೊಗದ ನಗುವಿಗಾಗಿ ಕ್ಷಣ ಕ್ಷಣ ನಾ ಜಪಿಸುವೆ
ಆ ಕ್ಷಣದ ನಗುವಿನಲ್ಲಿ ಪ್ರತಿ ಕ್ಷಣ ನಾ ಬದುಕುವೆ

ನಿನ್ನ ಮಧುರ ಮಾತುಗಳಲಿ ನನ್ನೇ ನಾ ಮರೆಯುವೆ
ಆ ಮುತ್ತಿನ ಪ್ರತಿ ಶಬ್ದದಲ್ಲಿ ನನ್ನ ಹೆಸರ ಹುಡುಕುವೆ

ನಿನ್ನ ಓರೆಗಣ್ಣಿನ ನೋಟಕ್ಕಾಗಿ ಹಗಲಿರುಳೂ ಕಾಯುವೆ
ಆ ಒಂದು ನೋಟವನ್ನು ದಿನವೆಲ್ಲಾ ಸ್ಮರಿಸುವೆ

ತುಟಿಗಳಲಿ ಬರುವ ಹೆಸರಿಗಾಗಿ ತುದಿಗಾಲಲಿ ನಿಲ್ಲುವೆ
ಆ ಹೆಸರು ನನ್ನದೆನಲು ಆಗಸದಿ ತೇಲಾಡುವೆ

ನಮ್ಮ ನಡುವೆ ನಡೆದ ತಮಾಷೆಗಳನ್ನು ಪದೇ ಪದೇ ನೆನೆಯುವೆ
ಅದರಿಂದಾದ ಮುನಿಸು ನೆನೆಸಿ ಮುಗುಳ್ನಗೆಯ ಬೀರುವೆ

ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ

ಸೆಪ್ಟೆಂಬರ್ 28, 2011

ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ
ಸುರಗಳ ಪ್ರತಿಶಬ್ದದಲ್ಲಿ ಹಿಂದುತ್ವದ ಘೋಷಣೆ |ಪ|

ಸಿಂಹಗಳ ಗುಂಪಿದು ತಾಳಕೆ ಹೊಂದುತ
ರಾಷ್ತ್ರಾಭಿಮಾನದ ವಾದ್ಯವ ನುಡಿಸುತ
ನಾಭಿಯಿಂದ ಬಂದಂತಹ ಹಿಂದುತ್ವದ ಧ್ವನಿಯಿದು
ಮುಗಿಲೆತ್ತರ ಏರಲಿದೆ ಅಭಿಮಾನದ ಗುಡುಗಿದು

ನಾವೆಲ್ಲಾ ಹಿಂದು ಎಂಬ ಅಭಿಮಾನವು ಬೆಳೆಯಲಿ
ಪುಷ್ಪವ್ರಷ್ಟಿಯ ಜೊತೆಗೆ ಜೈಕಾರವೂ ಮೊಳಗಲಿ
ಓಂಕಾರದ ನಾದದಲ್ಲಿ ಲೊಕವೆಲ್ಲ ಮುಳುಗಲಿ
ವಿಶ್ವಬಂಧು ಭಾವನೆಯು ಮನದಾಳದಿ ಮೂಡಲಿ

ನಾವೆಲ್ಲ ಒಂದು ಎಂಬ ಒಮ್ಮತವು ಹೊಮ್ಮಲಿ
ಮರುತದ ಪ್ರತಿ ಕಣದಲ್ಲಿ ಝೇಂಕಾರವು ಕೇಳಲಿ
ಸಾಗರದ ಸರಿಸಮದಲ್ಲಿ ಅಲೆಗಳು ಭೋರ್ಗರೆಯಲಿ
ಹಿಂದುರಾಷ್ಟ್ರ ನಂದಾದೀಪ ಚಿರಕಾಲ ಬೆಳಗಲಿ

ಸಪ್ತಸಾಗರದಾಚೆಗೆ ಏಕತ್ಮತಾ ಮಂತ್ರವು
ಮನೆ ಮನೆಯಲಿ ಮನಮನದಲಿ ಆಗಲದು ಪಕ್ವವು
ವಿಶ್ವವೆಲ್ಲವಾಗುವುದು ಭಗವಂತನ ಮಂದಿರವು
ಸಂಘಟನ ಶಕ್ತಿಯೇ ಅದಕ್ಕಿರುವ ತಂತ್ರವು.

ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ

ನನ್ನ ಹಳೆಯ ಬ್ಲಾಗ್ ಗಳು

ಸೆಪ್ಟೆಂಬರ್ 28, 2011

http://throughdawindow.livejournal.com/
http://shrikantkalkoti.blogspot.com/